Tuesday, December 13, 2011

ಹೋರಾಟ


ಅಂತರಾಳದಲ್ಲಿನ ಮೂಕನೋವುಗಳು
ಹೇಳಲಾರದೆ ಅರಿದವು ಕಣ್ಣೇರಿನ ರೂಪದಲ್ಲಿ
ಹುಟ್ಟಿದ್ದೇ ತಪ್ಪಾ ಹೆಣ್ಣಾಗಿ???????

ಅಣ್ಣ-ತಮ್ಮದಿರಂತೆ ಸಂಗವ ಕಟ್ಟಿ ಆಡಲಿಲ್ಲ
ಬಾಲ್ಯದ ಸಂತೋಷಗಳ ಸವಿಯಲಿಲ್ಲ
ತಾಯಿಯ ಪ್ರೀತಿ , ಅದರಲ್ಲೂ ಸವತಿ ಮತ್ಸರ
ಕಲಿಯಲಿಲ್ಲ, ಕಲಿಯುವ ವಯಸ್ಸಿನಲ್ಲಿ
ತಿಳಿಯಲಿಲ್ಲ , ಅರಿಯಲಿಲ್ಲ ಲೋಕ ಜ್ಞಾನವ

ಹೆಣ್ಣೆಂದರೆ ಹೇಳಲರಿಯದ ತಿರಸ್ಕಾರ
ತಾಳಲಾರದ ಹೊರೆಯಂತೆ ದೂರುವರು ಹಗಲು-ರಾತ್ರಿ
ಜೀವನದ ಸಂತೋಷಗಳ ಕಂಡುಣ್ಣುವ
ಸ್ವಾತಂತ್ಯ್ರದ ಹಕ್ಕಿಯಂತೆ ಹಾರಾಡುವಾಸೆ ಅವಳಿಗೂ
ಇದೆ ಎಂಬ ಸತ್ಯವನ್ಯಾರೂ ಅರಿಯಲಿಲ್ಲ.

ನಾಲ್ಕು ಗೋಡೆಗಳ ನಡುವೆಯೇ ಅವಳ ಬದುಕ್ಕೆಲ್ಲಾ
ಗಾಣದೆತ್ತಿನಂತೆ ತಿರುಗುತಿಹುದು,
ಹೆಣ್ಣಿನ ಕಥೆ ಇದು ನಿತ್ಯ ಜೀವನದಲ್ಲಿ
ಸ್ವಾತಂತ್ರ್ಯ ಬಂದು ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕದರೂ
ಇವಳಿಗೆ ಮಾತ್ರ ಸಿಗಲಿಲ್ಲ, ತನ್ನ ಸ್ವಾತಂತ್ರ್ಯ, ಸ್ಧಾನಮಾನ
ಏನೆಂದು ತಿಳೀದ್ಯಾರು ಹೆಣ್ಣನ್ನು???
ಅಪಶಕುನಕ್ಕೆಲ್ಲಾ ಅವಳೇ ಹೊಣೆಯೇನು?
ಎಲ್ಲ ನೋವುಗಳು ಅವಳಿಗೀ ಮೀಸಲೇನು?
ಭಂಡೇಗಲ್ಲೇನು????? ಎಲ್ಲ ಕಷ್ಟ-ನೋವಿಗಳ ಸಹಿಸಲು
ಅಬ್ಬಕ್ಕ-ಚಿನ್ನಮ್ಮ- ಅಕ್ಕರಂತಹವರು ಹುಟ್ಟಿದ ನಾಡಲ್ಲಿ ಹೆಣ್ಣೆಗೆ ಇಂತಹ ಪರಿಸ್ಧಿತಿ!!!!!!!

ಕಷ್ಟ-ನೋವುಗಳಲ್ಲಿ ಬೆಂದು ಬಸವಳಿಯುತ್ತಿರುವ
ಓ, ಹೆಣ್ಣೇ ನಿಲ್ಲಿಸು ನಿನ್ನ ಕಣ್ನೀರ ಕಡಲನ್ನು
ಹೊಸದಾಗಿ ನೀ ಬರೆ ನೂತನ ಚರಿತ್ರೆಯನು
ಬಗ್ಗಬೇಡ ಅನ್ಯಾಯಕ್ಕೆ, ಎತ್ತರಿಸಿ ನಿಲ್ಲು ಗಗನದೆತ್ತರಕ್ಕೆ
ಛಲಬಿಡದ ತ್ರಿವಿಕ್ರಮನಂತೆ ಬೆನ್ನಟ್ಟು, ನಿನ್ನ ಸ್ವಾತಂತ್ರವ
ಮೌನಿಯಾಗ ಬೇಡ ಎಲ್ಲ ನೋವಿಗಳನ್ನು ಸಹಿಸುತ್ತಾ
ನಿನ್ನಲಿಯೂ ಒಂದು ಆತ್ಮ ಶಕ್ತಿಯುಂಟು ಜಾಗ್ರುತಗೊಳಿಸು
ಶಕ್ತಿಯಾ, ಗಳಿಸಿಕೋ ಆ ಕಿಚ್ಚನು ವೀರ ರಮಣಿಯಂತೆ ಹೋರಾಡಲು.

ಅಂಜಬೇಡ-ಅಳುಬೇಡ, ನಿನ್ನತನವ ಬೆಡಬೇಡ
ಮರುಳಾಗಬೇಡ ಸಮಾಜದ ಸಂಪ್ರದಾಯಗಳ ಕುಟಿಲತನಕ್ಕೆ

ನಿನ್ನ ಸ್ವಾತಂತ್ರ್ಯ ನಿನಗೆ ಮತ್ತೆ ಸಿಗುವವರೆಗೂ ಹೊರಾಡು
ಮಾದರಿಯಾಗು ಸ್ಫೂತಿ೵ಯ ಚಿಲುಮೆಯಾಗು, ನಿನ್ನಂತೆ
ಬಸವಳಿಯುವವರಿಗೆ

ಅಚ್ಚಳಿಯದೆ ಸುವಣಾ೵ಕ್ಷರದಲ್ಲಿ ಮೂಡುವುದು ನಿನ್ನ ಹೆಸರು ಸ್ತ್ರೀ ಕುಲದಲ್ಲಿ
ಸೂಯ೵- ಚಂದ್ರನಿರುವವರೆಗೆ


__________________________ ಶೋಭಾ

Wednesday, December 7, 2011

ದಿವ್ಯ ಚೇತನ



ಕಲಿಯುಗದ ಬುದ್ಧ ನೀನು
ಅಹಿಂಸೆಯಿಂದಲೇ ಎಲ್ಲವನ್ನು
ಗೆದ್ದವನು ನೀನು


ಬ್ರಿಟೀಷರ ದಾಸ್ಯದ ಸಮಕೋಲೆಗಳಲ್ಲಿ
ಸುತ್ತುವರೆದಿದ್ದ ದಬ್ಬಾಳಿಕೆಯನು
ಶಾಂತಿಯಿಂದಲೇ ಹಿಮ್ಮೆಟಿದವನು ನೀನು
ಆದಶ೵ ಸ್ವಾತಂತ್ರ್ಯವೆಂಬ

ಕಿಚ್ಚನ್ನು ಎಲ್ಲರಲ್ಲೂ ಹೊತ್ತಿಸಿ


ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ

ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲೆನೂ ಒಂದುಗೂಡಿಸಿ

ಶಾಂತಿಮಂತ್ರವ ಭೋಧಿಸಿದ ಮಹಾಭೋಧಿ ನೀನು

ವಿದೇಶಿ ವಸ್ತ್ರಗಳನೆಲ್ಲ ಸುಟ್ಟು
ನೀನಾಕಿದೆ ಖಾದಿಗೆ ಹುಟ್ಟು


ದಂಡಿಯಲಿ ಉಪ್ಪು ತಯಾರಿಸಿ

ಹೇಳಿಕೊಟ್ಟೆ ಎಲ್ಲರಿಗೂ ನಾವೆಂದು
ಗುಲಾಮರಲ್ಲ ಅವರಿಗೆ ಎಂದು

ನೀನೊಬ್ಬ ಮುಂದೆ-ಮುಂದೆ
ಸಾವಿರಾರು ಸೇನಾನಿಗಳು ನಿನ್ನ
ಹಿಂದೆ-ಹಿಂದೆ


ಭಾರತ ಬಿಟ್ಟು ತೊಲಗಿ ಎಂಬ
ಕೂಗಿಗೆ ನಡುಗಿತು ಬ್ರಿಟೀಷರ ಪಾಳ್ಯ
ಹೆದರಿ ಹೌಹಾರಿದರು ಈ ಮಹಾತ್ಮನ
ಮಹಾತ್ಮೆಗೆ, ಅವನ ಬೆನ್ನಿಂದೆ ಇದ್ದ
ಸಾವಿರಾರು ದೇಶಭಕ್ತರ ಕೂಗಿಗೆ


ಕೆಟ್ಟದನ್ನು ನೋಡದೆ, ಮಾಡದೇ ,ಕೇಳದೆ
ನೀನಿರಬೇಕೆಂದು ಭೋಧಿಸಿದೆ
ರಘುಪತಿ ರಾಘವರಾಜಾರಾಮ್

ಪತೀತ ಪಾವನ ಸೀತಾರಾಮ್
ಈಶ್ವರ ಅಲ್ಲಾ ತೇರೇ ನಾಮ್
ಸಬುಕೋ ಸನ್ನಮತಿ ದೇ ಭಗವಾನ್
ಎಂದು ಮನದಲ್ಲೇ ಪಠಿಸಿದೆ.



ನಿನ್ನ ಸಾರಥ್ಯದಲ್ಲಿ ದೊರಕಿತು ಸ್ವಾತಂತ್ರ್ಯ

ಮುಕ್ತಳಾದಳು ಭಾರತಮಾತೆ

ಧನ್ಯಳಾದಳು ನಿನ್ನಂತಹ ಮಗನನ್ನು ಪಡೆದು


ಅದೊಂದು ಘೋರ ಕರಾಳದಿನ

ನೀನು ರಕ್ತದ ಮಡುವುನಲಿ

ಒದ್ದಾಡಿ ಪ್ರಾಣಬಿಟ್ಟ ಕ್ಷಣ

ನಿನ್ನ ಬಾಯಿಂದ ಬಂದದ್ದು

ದಿವ್ಯ ಸಂಜೀನಿನಿ ಮಂತ್ರ




ಹೇ ರಾಮ್ ಹೇ ರಾಮ್ ಹೇ ರಾಮ















Friday, October 7, 2011

ನಮಸ್ಕಾರ ಗೆಳೆಯ/ಗೆಳತಿಯರೇ
ನನ್ನ ಇಲ್ಲಿನ ಎಲ್ಲಾ ಕವನಗಳನ್ನು ಓದಿ ಬೆನ್ನು ತಟ್ಟಿದ್ದಕ್ಕೆ ವಂದನೆಗಳು.