Thursday, May 10, 2007

ಹುಚ್ಚು ಮನಸ್ಸು

ಹುಚ್ಚು ಮನಸ್ಸು

ಅಗೋಚರ ಅಗಣಿತ ಚಿಂತೆಗಳ ನಡುವಿನಲ್ಲಿ
ಅರಳುವ ಮನಸುನೂರಾರು ಭಾವನೆಗಳ ವೇದನೆಗಳ
ನಡುವೆಯಲ್ಲಿಯು ಜೀವಂತವಾಗಿ ಸತ್ತಂತಿರುವ ಮನಸು
ಇಲ್ಲ ಸಲ್ಲಗಳಿಗೆ ಮಿತಿ ಇಲ್ಲದೆ ಆಸೆಗಳನ್ನು ಕಟ್ಟುತ್ತಾ
ಎಂದಾದರು ಒಂದು ದಿನಾ ನನಸಾಗುವುದೇನೋ
ಎಂಬ ಭ್ರಮೆಯಲ್ಲಿ ಬಿದ್ದು ನರಳುತಿಹುದು


ಸಾವಿರಾರು ಆಸೆಗಳು...........
ನೂರೆಂಟು ಕನಸುಗಳು..........
ಇವೆಲ್ಲ ನಿಜವೆಂದೋ ?????????
ಸತ್ಯವಾಗುವುದೆಂದೋ????????


ಆದರೂ ಹತಾಶ ಭಾವದಲ್ಲಿ ಹೊಂಗನಸುಗಳ
ಸೌದಗಳನ್ನು ಕಟ್ಟುತ್ತಾ ಸವೆಯುತಿಹುದು ಜೀವನ
ಅಗೋಚರವಾದ ಜೀವನದ ತಿರುವುಗಳಲ್ಲಿಯಾವುದು

ನಡೆಯುವುದೋ? ಇಲ್ಲ ಮುದುರಿ , ಮುಳುಗಿ ಮಾಸಿ ಹೋಗುವುದೋ!
ಯಾರಿಗೂ ತಿಳಿಯದ ತಿಳಿಯಲಾರದ ಗುಟ್ಟು


ಏನೇನಿದೆ ಈ ಜಗದಲ್ಲಿ ಒಂದು ನಗುವಿನ ಹೋರತು
ನಕ್ಕು ಬಿಡು ಒಂದು ಬಾರಿ ಮರೆತು ಎಲ್ಲಾ ನೋವುಗಳ
ಹಗುರಾಗುವುದು ಮನಸ್ಸಿನ ನೋವಿನ ವೇದನೆಯಿಂದ ಮೊಗ


ಬೇಯಬೇಡ ಈಡೇರದ ಬಯಕೆಗಳ ಹಿಂದೆ ಬಿದ್ದು
ಹುಚ್ಚನಂತೆಆದಿ-ಅಂತ್ಯಗಳ ನಡುವಿನ ಜೀವನದಲ್ಲಿ ಎಂದೂ
ಸಿಗುವುದಿಲ್ಲ ಎಲ್ಲಾ ಪ್ರಶ್ನೆಗಳಿಗೆ ಉತ್ತರ


ಏಕೆ ಓಡುವೆ ಹುಚ್ಚು ಮನಸ್ಸಿನ ಜೊತೆ
ಬಿಸಿಲ ಕುದುರೆಯಂತೆ
ಒಂದೇ ಒಂದು ಸಲ ಹಿಡಿಯೋ
ಅದರ ಜೀನವ
ನೀನಾಗುವೆ ಆಗ ನಿಜ ಮಾನವ

ರಂಗಿ (ನನ್ನ ಹೊಸ ಕಾವ್ಯನಾಮ)