Friday, April 13, 2007

ಅಂತರಂಗ

ಅಂತರಂಗದಲ್ಲಿ ಅಡಗಿದ್ದಂತಹ
ಹೋಂಗನಸುಗಳು ನೂರಾರು
ನೀರೆರೆದು ಪೊಷಿಸುವರಿಲ್ಲದೆ
ಎಲ್ಲವು ನೆಲಕಚ್ಚಿ ಹೋದವು


ಹುಟ್ಟುವ ಮೊದಲು ಅದೆಷ್ಟು
ತಾತ್ಸಾರಕ್ಕೋಳಗಾಗಿದ್ದೆನೋ ಗೋತ್ತಿಲ್ಲ
ಆದರೆ ಬೆಳೆ ಬಳೆಯುತ್ತಾ ಎಲ್ಲವು
ಅರ್ಥವಾಗುತ್ತಾ ಬಂತು , ನನಗೆ
ಯಾವುದೇ ಸ್ವತಂತ್ರವಿಲ್ಲವೆಂದು

ಆ ತಾಯಿ ತಾನೇ ಏನು ಮಾಡಿಯಾಳು
ಅವಳುನನ್ನಂತೆ ಮೊಕ ಪ್ರೇಷಕಳು


ಅಂತರಂಗದಲ್ಲಿ ಅಡಗಿದ್ದಂತ
ಹಹೋಂಗನಸುಗಳು ನೂರಾರು
ಜಿಂಕೆಯಂತೆ ಜಿಗಿಯಬೇಕು
ಹಕ್ಕಿಯಂತೆ ಹಾರಬೇಕು
ಮೀನಿನಂತೆ ಈಜಬೇಕು
ಏನೆಲ್ಲಾ ಕನಸುಗಳು
ಅದಕ್ಕೆ ಸ್ಫಂದಿಸದ ಕಲ್ಲು ಮನಸ್ಸುಗಳು
ಏನನ್ನು ಅನುಭವಿಸಲು ಬಿಡಲಿಲ್ಲ

ಅಂತರಂಗದಲ್ಲಿ ಅಡಗಿದ್ದಂತಹ
ಹೋಂಗನಸುಗಳು ನೂರಾರು
ಆದರೇ ನಿನ್ನ ಸಮಾಜ ಈ ನಾಲ್ಕು ಗೋಡೆ
ಅದನ್ನು ಬಿಟ್ಟು ನೀನು ಹೊರ ಬರುವಂತಿಲ್ಲ
ಎಂದಾಗ ನನ್ನ ಆಸೆಯ ಹೆಬ್ಬಂಡೆಗಳೆಲ್ಲ
ಹೊಡೆದು ಕೋಟಿ ಚೂರು ಚೂರುಗಳಾಗಿ ಹೋದವು


ನಾನೇನು ಮಾಡಬಾರದ
ತಪ್ಪು ಮಾಡಿದೆ?
ಏತಕೇ ಈ ಶಿಷ್ಯೆ
ಎಷ್ಟು ಗೋಗರೆದರು ಸ್ವಂದಿಸದ ದೇವರುಗಳು
ಸತ್ತು ಹೋದರು ನನ್ನಪಾಲಿಗೆ
ನನಗೆ ನ್ಯಾಯ ಸಿಗದಿದ್ದಾಗ

ಯಾವುದಕ್ಕೋ ಓ ಗೋಡದ

ನಾವೇ ಮೇಲೆಂದು ದಬ್ಬಾಳಿಕೆ ನಡೆಸು
ಅಪುರುಷ ಸಮಾಜದಲ್ಲಿ
ಬೆಲೆ ಇಲ್ಲ ಆಸೆಗಳಿಗೆ, ಗಾರವವಿಲ್ಲ ಕನಸುಗಳಿಗೆ
ಇದ ಕಂಡು ಅಂತರಂಗದಲ್ಲಿನ ಆಸೆಗಳೆಲ್ಲವೂ
ಸಮಾದಿಯಾಗಿ ಹೋಗಿವೆ.


------------------ ಶೋಭ