ಹುಚ್ಚು ಮನಸ್ಸು
ಅಗೋಚರ ಅಗಣಿತ ಚಿಂತೆಗಳ ನಡುವಿನಲ್ಲಿ
ಅರಳುವ ಮನಸುನೂರಾರು ಭಾವನೆಗಳ ವೇದನೆಗಳ
ನಡುವೆಯಲ್ಲಿಯು ಜೀವಂತವಾಗಿ ಸತ್ತಂತಿರುವ ಮನಸು
ಇಲ್ಲ ಸಲ್ಲಗಳಿಗೆ ಮಿತಿ ಇಲ್ಲದೆ ಆಸೆಗಳನ್ನು ಕಟ್ಟುತ್ತಾ
ಎಂದಾದರು ಒಂದು ದಿನಾ ನನಸಾಗುವುದೇನೋ
ಎಂಬ ಭ್ರಮೆಯಲ್ಲಿ ಬಿದ್ದು ನರಳುತಿಹುದು
ಸಾವಿರಾರು ಆಸೆಗಳು...........
ನೂರೆಂಟು ಕನಸುಗಳು..........
ಇವೆಲ್ಲ ನಿಜವೆಂದೋ ?????????
ಸತ್ಯವಾಗುವುದೆಂದೋ????????
ಆದರೂ ಹತಾಶ ಭಾವದಲ್ಲಿ ಹೊಂಗನಸುಗಳ
ಸೌದಗಳನ್ನು ಕಟ್ಟುತ್ತಾ ಸವೆಯುತಿಹುದು ಜೀವನ
ಅಗೋಚರವಾದ ಜೀವನದ ತಿರುವುಗಳಲ್ಲಿಯಾವುದು
ನಡೆಯುವುದೋ? ಇಲ್ಲ ಮುದುರಿ , ಮುಳುಗಿ ಮಾಸಿ ಹೋಗುವುದೋ!
ಯಾರಿಗೂ ತಿಳಿಯದ ತಿಳಿಯಲಾರದ ಗುಟ್ಟು
ಏನೇನಿದೆ ಈ ಜಗದಲ್ಲಿ ಒಂದು ನಗುವಿನ ಹೋರತು
ನಕ್ಕು ಬಿಡು ಒಂದು ಬಾರಿ ಮರೆತು ಎಲ್ಲಾ ನೋವುಗಳ
ಹಗುರಾಗುವುದು ಮನಸ್ಸಿನ ನೋವಿನ ವೇದನೆಯಿಂದ ಮೊಗ
ಬೇಯಬೇಡ ಈಡೇರದ ಬಯಕೆಗಳ ಹಿಂದೆ ಬಿದ್ದು
ಹುಚ್ಚನಂತೆಆದಿ-ಅಂತ್ಯಗಳ ನಡುವಿನ ಜೀವನದಲ್ಲಿ ಎಂದೂ
ಸಿಗುವುದಿಲ್ಲ ಎಲ್ಲಾ ಪ್ರಶ್ನೆಗಳಿಗೆ ಉತ್ತರ
ಏಕೆ ಓಡುವೆ ಹುಚ್ಚು ಮನಸ್ಸಿನ ಜೊತೆ
ಬಿಸಿಲ ಕುದುರೆಯಂತೆ
ಒಂದೇ ಒಂದು ಸಲ ಹಿಡಿಯೋ
ಅದರ ಜೀನವ
ನೀನಾಗುವೆ ಆಗ ನಿಜ ಮಾನವ
ರಂಗಿ (ನನ್ನ ಹೊಸ ಕಾವ್ಯನಾಮ)
ಕ್ಯಾಮರಾ ಕಣ್ಣಿನಿಂದ 46
11 years ago
5 comments:
ಕವಿತೆಯು ಮನಸ್ಸಿನ ಮಾತನ್ನು ಕೇಳುವಂತೆ ಮನಸ್ಸು ಕವಿತೆಯ ಮಾತನ್ನೇಕೆ ಕೇಳದು?? :-)
nimma ella kavithegalanna anubhavisi baritha irodakke dhanyavada....
idanna hage munduvarisi...
nanna shubha haraikegalu...
illi nanna andre bari nanalla, ella odugaru idare...
ವಾಹ್ ವಾಹ್ - ಸುಂದರ ಕವನಗಳು ಅರಳಿವೆ. ನಿಮ್ಮ ಚಿಂತನಾ ಪರಿ, ಅದಕ್ಕೆ ಹಾದಿ ತೋರುತಿರುವ ಪದ ಪುಂಜಗಳು ಒಂದರ ಹಿಂದೆ ಒಂದರಂತೆ ಅಮೋಘವಾಗಿವೆ.
ಈ ಹೂದೋಟ ಇನ್ನೂ ಹಲವು ಬಗೆಯ ಹೂ ಹಣ್ಣುಗಳ ಗಿಡ ಮರಗಳನ್ನು ಹೊಂದಲಿ. ನೋಡುಗರ, ಓದುಗರ ಮನ ತಣಿಸಲಿ.
ಬಹಳ ಸುಂದರ ಬ್ಲಾಗು.
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ella kavitegalu tumba chenngive....
adrallu hucchu manassu ondu hejje munde ide....
Blog tumba Chennagide...
ಹೀಗೆ ಬರೀತಾ ಇರಿ...ಚೆನ್ನಾಗಿ ಬರಿತೀರ..
Post a Comment