ಓ ಗೆಳೆಯ ಕಾದಿರುವೆ..................................
ಕಣ್ಣಲ್ಲಿ ಕಾಣುತಿಹುದು ಪ್ರೀತಿಯ ಬಿಂಬ
ನೀನೆ ತುಂಬಿರುವೆ ನನ್ನ ಮನದಾಳದ
ತುಂಬಾಹ್ರುದಯವೆಂಬ ಹಕ್ಕಿ ಗರಿಬಿಚ್ಚಿ
ಹಾರುತಿದೆ ನಿನ್ನಯ ನೆನಪಿನಲ್ಲಿಎಂತಹ
ಮನರೋಮಾಂಚನ ನಿನ್ನನೆನಪಿನ ಮಾತುಗಳ ದಾಟಿ
ಹಾಡುತಿಹುದು ಮನವು
ಕಾಯುತಿಹುದು ತನುವು
ಸ್ವಾತಿ ಮಳೆಯ ಚುಂಬನಕ್ಕಾಗಿ ಬಾಯ್
ತೆರೆದು ನಿಂತ ಕಪ್ಪೆಚಿಪ್ಪಿನಂತೆ ,
ಕಾದಿರುವೆ ನಿನ್ನ ನೋಟಕ್ಕೆ
ಕರಿಯ ಕಾರ್ಮೊಡಗಳ ಗುಡುಗು
ಸಿಡಿಲು ಕೋಲ್ಮಿಂಚುಗಳ ಆರ್ಭಟ
ನಿನ್ನ ಮೇಲೆ ಮಾಡಿರುವುದು ಮಾಟ
ನೀಲಿ ನಸುಗೆಂಪು ಚಲ್ಲಿದ ಆಗಸದ ಬಣ್ಣ
ನಿನ್ನ ನೆನಪಿನಲ್ಲಿ ಮರೆಯುವಂತೆ ಮಾಡಿದೆ ನನ್ನ
ಮನದಾಳದಲ್ಲಿ ಸದ್ದಿಲ್ಲದೆ
ಗುಡುಗಿ ಮಳೆಯಾದವನು ನೀನು
ಪ್ರೀತಿಯ ಬೀಜವ ಹುತ್ತಿ ಬಿತ್ತಿಹೆಮ್ಮರವಾಗಿಸಿ
ಪ್ರೀತಿಯ ಹಣ್ಣನ್ನು ಇಬ್ಬರು ಹಂಚಿತಿನ್ನುವ
ಕನಸು ಕಾಣುತಿರುವಾಗಲೆ ಎಲ್ಲಾ ಅಲ್ಲೋಲಕಲ್ಲೋವಾಯಿತು
ಎಲ್ಲಾ ಪ್ರೇಮಿಗಳಂತೆ ನಮಗು ತಪ್ಪಲಿಲ್ಲ ಪರೀಕ್ಶಿ
ಇತಿಹಾಸ ಸಾಕ್ಶಿಯಾಗಿ ಯಾವ ಪ್ರೇಮಿಗಳು
ಒಂದಾಗಲಿಲ್ಲ
ಗೆಳೆಯ,ಅವರೆಲ್ಲ ಅಮರರಾದರು
ಹೆದರಿಕೆಯಿಲ್ಲ ಸಮಾಜಕ್ಕೆ,
ಸಂಪ್ರದಾಯಕ್ಕೆ
ಗೆಳೆಯ ಕಾದಿರುವೆ ನಿನಗಾಗಿ
ಬರುವೆ ತಾನೆ ??????????????
ಕ್ಯಾಮರಾ ಕಣ್ಣಿನಿಂದ 46
11 years ago
4 comments:
its great dear...............
Really nice reading.....
A true love of a girl which comes in your words. It’s really good. Keep writing. First time I am reading girl poetry. Your poems introduce feminine heart. Thanks for that. you put good photo on your blog.
ಪ್ರಿಯ ಶೋಭ ಅವರೇ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಅಮರ
Post a Comment